ಹೆಣ್ಣು ನಾನು
ಶಿವನುರಿಗಣ್ಣು ನಾನು
ಕಾಡಿಸಿ ಪೀಡಿಸಿದರೆ
ಸುಟ್ಟುಬಿಟ್ಟೇನು.
ಹೆಣ್ಣು ನಾನು
ಕಾಳಿಯ ಕೈಕಾಲು ನಾನು
ದುಷ್ಟತನದ ಮುಂಡ ಕೊಚ್ಚೇನು
ರುಂಡ ಮೆಟ್ಟೇನು.
ಹೆಣ್ಣು ನಾನು
ಹರಿಯ ಕೈಯ ಬೆರಳು
ನಾನು
ಸೊಕ್ಕಿನ ಕಣ್ಣನು ಕಿವಿಚಿ
ಇಕ್ಕೇನು
ಅಳಿಸಿ ನಕ್ಕೇನು.
ಹೆಣ್ಣು ನಾನು
ಅಗಸ್ತ್ಯರ ಹೊಟ್ಟೆಯ ಕರುಳು ನಾನು
ಮೋಸ ವಂಚನೆಗಳ
ತಿಂದು ತೇಗೇನು.
ಹೆಣ್ಣು ನಾನು
ವಶಿಷ್ಟ ಗೋತ್ರದ ಕಾಮಧೇನು
ಪ್ರೀತಿಸಿ ಪೂಜಿಸಿದರೆ
ಏನೆಲ್ಲ ಕೊಟ್ಟೇನು
ಕಲ್ಪಲತೆಯ ನೆಟ್ಟೇನು.
ನೂತನ ಆರ್. ಕುಲಕಣಿ೯.
(ನಿರ್ಭಯಾಗೆ ಅರ್ಪಣೆ)
(ನಿರ್ಭಯಾಗೆ ಅರ್ಪಣೆ)
Bold & Beautiful.
ReplyDelete